Saturday, May 30, 2009
Thursday, May 21, 2009
Wednesday, May 20, 2009
Friday, May 8, 2009
Thursday, May 7, 2009
Wednesday, May 6, 2009
ಚಿತ್ರದುರ್ಗ/ ವಿಕ ಸಂವಾದ ಛಾಯಾಂಕಣ-೫
ಚಿತ್ರದುರ್ಗ/ ವಿಕ ಸಂವಾದ ಛಾಯಾಂಕಣ-೩
ಚಿತ್ರದುರ್ಗ/ ವಿಕ ಸಂವಾದ ಛಾಯಾಂಕಣ-೨
ಚಿತ್ರದುರ್ಗ / ವಿಕ ಸಂವಾದ ಛಾಯಾಂಕಣ-೧
Tuesday, May 5, 2009
ಎಸ್ಎಸ್ಎಲ್ಸಿ ಸಾಧಕರ ಜತೆ 'ವಿಕ ಸಂವಾದ'
ವಿಕ ಕಚೇರಿ ಅಕ್ಷರಶಃ ಅನುಭವ ಮಂಟಪ
ಚಿತ್ರದುರ್ಗ : ಮಂಗಳವಾರದ ಮಟ್ಟಿಗೆ ವಿಕ ಕಚೇರಿ ಮಂಗಳಮಯವಾಗಿತ್ತು. ಅಕ್ಷರಶಃ ಅನುಭವ ಮಂಟಪವಾಗಿ ಮಾರ್ಪಟ್ಟಿತ್ತು. ಇದಕ್ಕೆಲ್ಲ ಕಾರಣ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಮೊದಲ ಮೂವರಾಗಿ ಸಾಧನೆ ಮೆರೆದಿದ್ದ ಚಿಣ್ಣರು ಕಚೇರಿಯಲ್ಲಿ ಓದಿನ ಒಳಗುಟ್ಟನ್ನು ರಟ್ಟು ಮಾಡಿದ್ದು.
ಸಂದರ್ಭ : ಪತ್ರಿಕೆ ಆಯೋಜಿಸಿದ್ದ ‘ವಿಕ ಸಂವಾದ ’. ಸಾಥ್ ನೀಡಿದವರು : ಸಾಧಕರಿಗೆ ಸಕಲ ಪೋಷಣೆ ನೀಡಿದ ಪೋಷಕರು. ಜತೆಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ಶಂಕರಪ್ಪ.
ಸಂವಾದಗಳು ಸುದ್ದಿಮನೆಯಿಂದಾಚೆಗೆ ಸರ್ವೇಸಾಮಾನ್ಯ. ಆದರೆ, ವಿಕ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಹೊಸ ಅನುಭವ. ಅದಕ್ಕಾಗಿಯೇ ಮೈ ಚಳಿ ಬಿಟ್ಟು ಎಲ್ಲರೂ ಮುಕ್ತವಾಗಿ ಚರ್ಚೆಯಲ್ಲಿ ಭಾಗವಹಿಸಿದರು. ತಮ್ಮ ಅನುಭವ ಜನ್ಯ ಮಾತುಗಳಿಂದಾಚೆಗೆ ವಿದ್ಯಾರ್ಥಿ ಸಮುದಾಯ, ಶಿಕ್ಷಕರು, ಪೋಷಕರು ಹಾಗೂ ಇಲಾಖೆಗೆ ಹೊಸ ಬೆಳಕಾದರು.
ಸಂವಾದದ ಮಂಥನದಲ್ಲಿ ಬರೀ ಅಮೃತವಷ್ಟೇ ದೊರೆಯಲಿಲ್ಲ. ಹಾಲಾಹಲವೂ ತೇಲಿಬಂತು. ಮಕ್ಕಳ ಶಿಸ್ತುಬದ್ಧ ಅಧ್ಯಯನ,ಪ್ರಬುದ್ಧ ಆಲೋಚನೆ ಹಾಗೂ ಪೋಷಕರ ಮಹಾಪೋಷಣೆ ವೈಖರಿಯನ್ನು ಕಂಡು ಮಹದಾನಂದವಾಯಿತು. ಇಂತಹ ಪೋಷಕರು ಬೇರೆಯ ಮಕ್ಕಳಿಗೆ ದೊರೆಯಲಿಲ್ಲವೆಂಬ ಖೇದವಾಯಿತು.
ಸಂವಾದದಲ್ಲಿ ಭಾಗವಹಿಸಿದ್ದ ಮೂವರು ಚಿಣ್ಣರಲ್ಲಿ ಜಿಲ್ಲೆಗೆ ಮೊದಲಿಗಳೆನಿಸಿದ ಹಿರಿಯೂರಿನ ಕಾವ್ಯಶ್ರೀ (ಶೇ.೯೬.೯೬), ಚಿತ್ರದುರ್ಗದ ದರ್ಶನ್ (ಶೇ. ೯೬) ಹಾಗೂ ಅಭಿರಾಂ (ಶೇ.೯೫.೮೪) ಯಾರೊಬ್ಬರಿಗೂ ಓದು ಕಬ್ಬಿಣದ ಕಡಲೆಯೆನಿಸಿರಲಿಲ್ಲ.ಅದಕ್ಕಾಗಿ ಅವರು ಬೇರೆಲ್ಲ ಸುಖ ಸಂತೋಷಗಳನ್ನು ತ್ಯಾಗ ಮಾಡಿರಲಿಲ್ಲ. ನಲಿಯುತ್ತಲೇ ಕಲಿಯುತ್ತಾ ಅತ್ಯಕ ಅಂಕ ಗಳಿಸಿದ್ದಾರೆ.
‘ಓದಿನಲ್ಲಿ ಶಿಸ್ತು ಪಠ್ಯಕ್ರಮಕ್ಕೆ ಒತ್ತು’ ಅವರ ಮೂಲಮಂತ್ರವಾಗಿತ್ತು. ಜತೆಗೆ ವಿಡಿಯೋ ಗೇಮ್ನಲ್ಲಿ ವಿಲಾಸ, ಕಾದಂಬರಿಯಲ್ಲಿ ವಿಹಾರ ಹಾಗೂ ಆಟೋಟದ ಕಡೆಗೂ ನೋಟ ಬೀರಿ ಯಶಸ್ಸಿನ ಶಿಖರ ತಲುಪಿದ್ದಾರೆ. ಇದರಿಂದ ಯಾರೊಬ್ಬರಲ್ಲೂ ಹಮ್ಮುಬಿಮ್ಮು ಮೂಡಿಲ್ಲ. ವಿಜಯಮಾಲೆ ಧರಿಸಿ ಬಾಗಿ, ಮಾಗಿದ್ದಾರೆ. ಮುಂದಿನ ಹಾದಿಯ ಕಡೆಗೆ ಮೆಲ್ಲಮೆಲ್ಲನೆ ಹೆಜ್ಜೆಯಿಡುವ ಕನಸು ಹೊತ್ತಿದ್ದಾರೆ.
‘ಮಕ್ಕಳಲ್ಲಿ ಭಯ ಹೋಗಲಾಡಿಸಬೇಕು. ಅದು ಬುದ್ಧಿಯನ್ನು ಮಸುಕಾಗಿಸುತ್ತದೆ. ಪತ್ರಿಕೆಯಲ್ಲಿ ಬರುವ ಕ್ಷಣಹೊತ್ತು ಆಣಿಮುತ್ತನ್ನು ತಪ್ಪದೇ ಓದಲು ಹೇಳುತ್ತೇನೆ. ಡೊನೇಷನ್ ಹಾವಳಿ ವಿರುದ್ಧವೂ ದನಿ ಎತ್ತಿದ್ದೇನೆ. ಮಕ್ಕಳ ಮೇಲೆ ನಮ್ಮ ಆಸೆಗಳನ್ನು ಹೇರಬಾರದು. ಮಕ್ಕಳಿಗೆ ಶಿಸ್ತು,ಪ್ರಾಮಾಣಿಕತೆ ಹಾಗೂ ನೈತಿಕತೆಯನ್ನು ಬೋಸದಿದ್ದರೆ ಅದೆಂಥ ಶಿಕ್ಷಣ? ಜಿಲ್ಲೆಯನ್ನು ಪ್ರತಿನಿಸುವ ಪ್ರತಿಭಾವಂತ ಮಕ್ಕಳಿಗೆ ನೀವು (ಶಿಕ್ಷಣ ಇಲಾಖೆ )ಮಾರ್ಗದರ್ಶನ ನೀಡಬೇಕು...’ಹೀಗೆ ಹತ್ತಾರು ಪ್ರಶ್ನೆಗಳು,ಆಲೋಚನೆಗಳನ್ನು ಹರಿಯಬಿಟ್ಟ ಪೋಷಕರಂತೆ ಎಲ್ಲರೂ ತಮ್ಮ ಜವಾಬ್ದಾರಿ ಮೆರೆದರೆ ಎಷ್ಟು ಚೆನ್ನ ಎಂಬ ಭಾವನೆಯನ್ನು ಬಾರಿ ಬಾರಿ ಮೂಡಿಸಿತು.
ಪೋಷಕರು ಸರಕಾರಿ ಶಾಲೆಗಳತ್ತ ಚಿತ್ತ ಹರಿಸಿದರೆ ಅಲ್ಲಿನ ಶಿಕ್ಷಕರು ಎಚ್ಚೆತ್ತುಕೊಳ್ಳುತ್ತಾರೆ. ಮಕ್ಕಳ ಹಾಜರಿಯೂ ಹೆಚ್ಚುತ್ತದೆ. ಸರಕಾರಿ ಶಾಲೆಗಳಿಗೆ ಮೂಲಸೌಕರ್ಯದ ಕೊರತೆಯಿಲ್ಲ. ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ ಎಂದು ವಿವರಿಸಿದ ಡಿಡಿಪಿಐ ಶಂಕರಪ್ಪ ,ಡೊನೇಷನ್ ಹಾವಳಿ,ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ ಜಿಲ್ಲೆಯ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಹಾಗೂ ಶಿಕ್ಷಕರ ಸಕ್ರಿಯ ಪಾತ್ರ ಅನಿವಾರ್ಯ ಎಂದು ಪ್ರತಿಪಾದಿಸಿದರು. ಪ್ರಗತಿಯ ಮುನ್ಕಾಣ್ಕೆಯನ್ನು ಬಿಚ್ಚಿಟ್ಟು , ಭರವಸೆ ಹುಟ್ಟಿಸಿದರು.

Subscribe to:
Posts (Atom)